ಏನಂತೆ? ? . . .! !
ಏನಂತೆ? ಸೋತರೇನಂತೆ?
ಏನಂತೆ? ಬಿದ್ದರೇನಂತೆ?
ನೋವೆಂಬುದೇನೆಂದು ತಿಳಿಯಿತಂತೆ!
ನೋಡಿ ನಡೆಯಲು ಕಲಿತೆನಂತೆ!!
ಏನಂತೆ? ಹಸಿವಾದರೇನಂತೆ?
ದುಡಿದು ಉಣ್ಣಲು ಮಾರ್ಗವಂತೆ!
ಹಳಸಿದ ಅನ್ನವೂ ರುಚಿಯಂತೆ!!
ಏನಂತೆ? ದುಃಖವಾದರೇನಂತೆ?
ಸಂತೋಷದ ದಾರಿ ಸಿಕ್ಕಿತಂತೆ!
ಸುಖವೆಂಬುದೊಳಗೇ ಇದೆಯಂತೆ!!
ಏನಂತೆ? ತಪ್ಪಾದರೇನಂತೆ?
ನಡೆ ತಿದ್ದಿ ಸಾಗುವ ಮನಸಂತೆ!
ತಲೆ ಎತ್ತಿ ನಡೆಯುವ ಕನಸಂತೆ!
ಏನಂತೆ? ನಿಂದಿಸಿದರೇನಂತೆ?
ನಿಂದಕರ ಬಾಯಿ ಹೊಲಸಂತೆ!
ನಾನಾರೆಂದು ನನಗೆ ತಿಳಿಯಿತಂತೆ!!
ಏನಂತೆ? ಸೂರಿಲ್ಲದಿರೇನಂತೆ?
ಲೋಕವೆ ನನ್ನ ಮನೆಯಂತೆ!
ಬಹು ದೊಡ್ಡ ಮನೆಯೇ ನನ್ನದಂತೆ!!
ಏನಂತೆ? ದಿಕ್ಕಿಲ್ಲದಿರೇನಂತೆ?
ಜನರೆಲ್ಲ ನನ್ನ ಬಂಧುಗಳಂತೆ!
ಬಲು ದೊಡ್ಡ ಸಂಸಾರ ನನ್ನದಂತೆ!!
? ? ! !
-ಕ.ವೆಂ.ನಾಗರಾಜ್.
ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು.
***********************
ಏನಂತೆ? ಸೋತರೇನಂತೆ?
ಸೋಲೆಂಬುದೇನೆಂದು ತಿಳಿಯಿತಂತೆ!
ಗೆಲುವಿನ ದಾರಿಯದು ಕಂಡಿತಂತೆ!!ಏನಂತೆ? ಬಿದ್ದರೇನಂತೆ?
ನೋವೆಂಬುದೇನೆಂದು ತಿಳಿಯಿತಂತೆ!
ನೋಡಿ ನಡೆಯಲು ಕಲಿತೆನಂತೆ!!
ಏನಂತೆ? ಹಸಿವಾದರೇನಂತೆ?
ದುಡಿದು ಉಣ್ಣಲು ಮಾರ್ಗವಂತೆ!
ಹಳಸಿದ ಅನ್ನವೂ ರುಚಿಯಂತೆ!!
ಏನಂತೆ? ದುಃಖವಾದರೇನಂತೆ?
ಸಂತೋಷದ ದಾರಿ ಸಿಕ್ಕಿತಂತೆ!
ಸುಖವೆಂಬುದೊಳಗೇ ಇದೆಯಂತೆ!!
ಏನಂತೆ? ತಪ್ಪಾದರೇನಂತೆ?
ನಡೆ ತಿದ್ದಿ ಸಾಗುವ ಮನಸಂತೆ!
ತಲೆ ಎತ್ತಿ ನಡೆಯುವ ಕನಸಂತೆ!
ನಿಂದಕರ ಬಾಯಿ ಹೊಲಸಂತೆ!
ನಾನಾರೆಂದು ನನಗೆ ತಿಳಿಯಿತಂತೆ!!
ಏನಂತೆ? ಸೂರಿಲ್ಲದಿರೇನಂತೆ?
ಲೋಕವೆ ನನ್ನ ಮನೆಯಂತೆ!
ಬಹು ದೊಡ್ಡ ಮನೆಯೇ ನನ್ನದಂತೆ!!
ಏನಂತೆ? ದಿಕ್ಕಿಲ್ಲದಿರೇನಂತೆ?
ಜನರೆಲ್ಲ ನನ್ನ ಬಂಧುಗಳಂತೆ!
ಬಲು ದೊಡ್ಡ ಸಂಸಾರ ನನ್ನದಂತೆ!!
? ? ! !
-ಕ.ವೆಂ.ನಾಗರಾಜ್.
ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು.
***********************
KAVI SURESH, SHIMOGA27 ಮೇ 2010 10:46 PM
ಪ್ರತ್ಯುತ್ತರಅಳಿಸಿಏನಂತೆ? ನಾ ಕವಿ ಅಲ್ಲದಿದ್ದರೇನಂತೆ?
ಬರೆವ ಕವಿಗಳಿಗಿಲ್ಲ ಅಭಾವ |
ಅವುಗಳನ್ನೋದಿ ಸವಿವುದು ನನ್ನ ಜೀವ ||
ಕವನ ಚೆನ್ನಾಗಿದೆ. ಅಭಿನಂದನೆಗಳು
ಕವಿ ಸುರೇಶ್, ಶಿವಮೊಗ್ಗ
ಕೌಶಿಕ26MAY2010 1:27
ಆತ್ಮ ವಿಶ್ವಾಸ ತುಂಬುವ ಸಾಲುಗಳು...
//ಏನಂತೆ? ಬಿದ್ದರೇನಂತೆ? ತುಂಬಾ ಇಸ್ಟ ಆಇತು..
ಶ್ರೀಕಾoತ ಕಲಕೋಟಿ26MAY2010 1:33
ನಾಗರಾಜರೆ ಉತ್ತಮವಾಗಿದೆ..
Ksraghavendranavada26MAY2010 1:49
ಕವಿನಾಗರಾಜರೇ, ಮತ್ತೊ೦ದು ಉತ್ತಮ ಕವನ ತಮ್ಮಿ೦ದ,
ಅಭಿನ೦ದನೆಗಳು.
ನಿಮ್ಮವ, ನಾವಡ.
ಶ್ರೀಕಾoತ ಕಲಕೋಟಿ26MAY2010 3:54
ಡಿ ವಿ ಜಿ ಯವರ 'ಕಲ್ಲಾಗು ಕಷ್ಟದಡಿ.. ನೆನಪಾತು
ಹೊಳೆ ನರಸೀಪುರ ಮಂಜುನಾಥ26MAY2010 1:56
ಅರ್ಥಪೂರ್ಣ ಕವನ ನಾಗರಾಜರೆ, ನಾನೂ ಸಹ "ಯಾರೇನಂದರೇನಂತೆ" ಅಂದುಕೊಂಡೇ ದುಬೈಗೆ ಹೋಗಿದ್ದು! ಸೋಲಿನ ಸನಿಹದಲ್ಲೇ ಗೆಲುವ ಕಂಡಿದ್ದು, ಮನ ಬಿಚ್ಚಿ ನಕ್ಕಿದ್ದು.
ಆಸು ಹೆಗ್ಡೆ26MAY2010 2:25
ಏನಂತೆ? ಯಾರು ಏನೆಂದರೇನಂತೆ?
ನಾನಂತೂ ಈ ಕವನ ಇಷ್ಟವಾಯ್ತೆಂದನುವೆನಂತೆ
ಕವಿಗಳಿನೆ ಧನ್ಯವಾದಗಳನು ಅರ್ಪಿಸುತ್ತಿರುವೆನಂತೆ
Kavinagaraj26MAY2010 3:00
ಬರಹ ಮೆಚ್ಚಿದ ಮತ್ತು ಪ್ರೋತ್ಸಾಹಿಸುತ್ತಿರುವ ಆತ್ಮೀಯರಾದ ನಾವಡ, ಕೌಶಿಕ್, ಶ್ರೀಕಾಂತ್, ಮಂಜು ಮತ್ತು ಸುರೇಶ ಹೆಗ್ಡೆಯವರೇ, ವಂದಿಸುವೆ ನಿಮ್ಮೆಲ್ಲರಿಗೆ. -:)
ಪದ್ಮ.ಎ 18FEB2012 10:11
ಏನಂತೆ ? ಕವನ ಬರೆದು ವರ್ಷಗಳೇ ಕಳೆದಿದ್ದರೇನಂತೆ?
ಮತ್ತೆ ಮತ್ತೆ ಓದಿಸುವುದಂತೆ
ಕವಿನಾಗರಾಜ್ ರವರೆ ಕವನ ಚೆನ್ನಾಗಿದೆ
-ಎ.ಪದ್ಮ
ಪದ್ಮರವರಿಗೆ ವಮದನೆಗಳು.
ಅಳಿಸಿRoopa Satish
ಅಳಿಸಿNagaraj... kavanada aashaya sooper! ಏನಂತೆ? ಹಸಿವಾದರೇನಂತೆ?
ದುಡಿದು ಉಣ್ಣಲು ಮಾರ್ಗವಂತೆ! ಹಳಸಿದ ಅನ್ನವೂ ರುಚಿಯಂತೆ!! bahaLa ishtavaaytu!
Kavi Nagaraj
ಧನ್ಯವಾದ, ರೂಪಾ ಸತೀಶರೇ.
ಗೆಲುವಿನ ಕಡೆಗೆ ಮನಸ್ಸನ್ನು ಹುರಿಗೊಳಿಸುವ ಕವನ.
ಪ್ರತ್ಯುತ್ತರಅಳಿಸಿಧನ್ಯವಾದಗಳು, ಬದರೀನಾಥರೇ.
ಅಳಿಸಿ