ಸೋಮವಾರ, ಮಾರ್ಚ್ 17, 2014

ರಂಗ


ರಂಗಾ ರಂಗಾ ಓ ರಂಗಾ ಬೇಗ್ ಬಾರೋ ನನ್ ರಂಗಾ|
ಹೇಗ್ ಬರಲಿ ಹೇಳಮ್ಮಾ ಪುರುಸೊತ್ತಿಲ್ಲ ಕಾಣಮ್ಮಾ||

ಹೊಲ ಗದ್ದೆ ಮಾರಾಯ್ತು ಇಂಜನೀರಿಂಗ್ ಓದ್ಸಾಯ್ತು|

ಹೋದ್ರೆ ಹೋಗ್ಲಿ ಬಿಡಮ್ಮಾ ಮಕ್ಳಿಗ್ ಮಾಡೋದ್ ನಿಮ್ ಧರ್ಮ||   ||ರಂಗಾ||


ಮನೆ ಮಂದಾಳ ಬಿಟ್ ಹೋಯ್ತು ನಿನ್ ನೌಕ್ರಿಗ್ ಪಾಡಾಯ್ತು|
ಹೋದ್ರೆ ಹೋಯ್ತು ಬಿಡಮ್ಮಾ ಮಕ್ಳಿಗ್ ಮಾಡೋದ್ ನಿಮ್ ಕರ್ಮ|| ||ರಂಗಾ||

ಅಪ್ಪಂಗ್ ಸೀರಿಯಸ್ ಕಾಣಪ್ಪಾ ಬೇಗ್ ಬಾರೋ ನನ್ ಮಗನೇ|

ಆಸ್ಪತ್ರೆಗ್ ಕರಕೊಂಡ್ ಹೋಗಮ್ಮಾ ದುಡ್ಡೆಷ್ಟ್ ಬೇಕು ಹೇಳಮ್ಮಾ||  ||ರಂಗಾ||


ಅಪ್ಪ ಕೈಬಿಟ್ರು ಕಾಣಪ್ಪಾ ಗತಿ ಕಾಣಿಸು ಬಾರಪ್ಪಾ|
ಸತ್ಮೇಲಿನ್ನೇನ್ ಬಿಡಮ್ಮಾ ಮಣ್ ಮಾಡಿ ಮುಗಿಸಮ್ಮಾ||                ||ರಂಗಾ||

                                                                -ಕ.ವೆಂ. ನಾಗರಾಜ್

2 ಕಾಮೆಂಟ್‌ಗಳು:

  1. ಬೆಳ್ಳಾಲ ಗೋಪೀನಾಥ ರಾವ್
    ಸಮಯೋಚಿತ ಉತ್ತಮ ಕವನ
    ನನ್ನಿ ನಾಗರಾಜ್ ಅವರೇ

    ವೆ೦ಕಟೇಶಮೂರ್ತಿ. ವಿ.ಎಸ್.
    ನಾಗರಾಜ್ ಅವರೇ ಉತ್ತಮ ಕವನ..
    ಈಗ ಬಹುತೇಕ ಹಳ್ಳಿಗಳಲ್ಲಿ ವಯಸ್ಸಾದ ಅಪ್ಪ-ಅಮ್ಮ ಮಾತ್ರ ಇರೋದು.. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗದ್ದೆ-ತೋಟ ಎಲ್ಲ ಮಾರಿ ಓದಿಸ್ತಾರೆ.. ಕೊನೆಗೆ ಹೆತ್ತವರ ಕಡೆ ತಿರುಗಿ ನೋಡೋ ಸೌಜನ್ಯ ಕೂಡಾ ಇರಲ್ಲ.. ಬರ್ತಾ ಬರ್ತಾ ಹಳ್ಳಿಗಳು ವೃದ್ದಾಶ್ರಮಗಳಾಗ್ತಾಇದೆ.. ನನ್ನಿ

    ಪ್ರತ್ಯುತ್ತರಅಳಿಸಿ
  2. Roopa Satish
    Kavi Nagaraj.... ಎ೦ತಾ ವಿಪರ್ಯಾಸವಿದು!

    Kavi Nagaraj
    Roopa Satishರವರೇ, ಇದು ಒಂದು ವಾಸ್ತವ ಘಟನೆ ಆಧರಿಸಿ ರಚಿಸಿದ್ದು! ನಿಜಕ್ಕೂ ಸ್ವಾರ್ಥ ಜಗವಿದು!

    ಪ್ರತ್ಯುತ್ತರಅಳಿಸಿ