ಶನಿವಾರ, ಮಾರ್ಚ್ 8, 2014

ಹಕ್ಕಿಯೊಂದು ಹಾರಿ ಬಂದು . . .

ಹಕ್ಕಿಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು
ಸುತ್ತಮುತ್ತ ಹಾರಿತು ಅತ್ತ ಇತ್ತ ನೋಡಿತು |
ಸರಿಯೆಂದು ಕಂಡಿತು ಗೂಡನೊಂದು ಕಟ್ಟಿತು
ಕಾಲ ಕೂಡಿ ಬಂದಿತು ಮೊಟ್ಟೆ ಮೂರು ಇಟ್ಟಿತು ||

ಹಕ್ಕಿಗಾಗಿ ಕೋಣೆ ತೆರವು ಮನೆಮಂದಿಯಲ್ಲ ನೆರವು
ತಾಯಿಗಿಲ್ಲ ತಲೆಭಾರ ಜೀವಸೆಲೆಗೆ ಉಪಕಾರ |
ಬಿಟ್ಟ ಬಾಣದಂತೆ ಹಾರಿ ಬಂದವರನು ಹೆದರಿಸಿತು
ಕಾವಲಿದ್ದು ಕಾವು ಕೊಟ್ಟು ತಾಯಿತನವ ಮೆರೆಯಿತು ||

ಮೊಟ್ಟೆ ಬಿರಿದು ಬೊಮ್ಮಟೆಗಳು ಬಂದವು
ತ್ರಾಣವಿಲ್ಲ ಕಾಣದೆಲ್ಲ ಕಿಚಿಪಿಚಿ ಕದಲಿದವು |
ನಾವು ತಾಳಲಾರೆವು ಅಮ್ಮ ಹಸಿವೆ ಅಮ್ಮ ಹಸಿವೆ
ಬಂದೆ ತಡಿ ಇಗೋ ಹಿಡಿ ಪ್ರೀತಿ ಎಲ್ಲ ಸುರಿವೆ ||

ಹಾ ಸರಿ ಹೀಗೆ ಮರಿ ಎಲ್ಲಿ ಹಾರು ನೋಡುವ
ಹಾರುವುದ ಕಲಿತ ಮೇಲೆ ಭರ್ ಎಂದು ಹಾರುವ |
ನಿಮ್ಮ ನೆರವು ನಮ್ಮ ನಲಿವು ಎನಿತು ಮಧುರ ಸಂಬಂಧ
ದ್ವೇಷ ಬಿಡಿ ಪ್ರೀತಿಸಿರಿ ಅನಿತು ಬಾಳು ಚೆಂದ ||
****************
-ಕ.ವೆಂ. ನಾಗರಾಜ್.
(ಆಧಾರ: ಶಿವಮೊಗ್ಗದ ದಿನಪತ್ರಿಕೆ 'ಜನಹೋರಾಟ'ದಲ್ಲಿ ಪ್ರಕಟವಾದ ಕವಿ ಸುರೇಶರ 'ಒಂದು ಗೂಡಿನ ಕಥೆ' ಎಂಬ ಸಚಿತ್ರ ಲೇಖನ;                                                                                                      ಚಿತ್ರಗಳು: ಬಿ.ಎಸ್.ಆರ್. ದೀಪಕ್.)




 














2 ಕಾಮೆಂಟ್‌ಗಳು:

  1. AMBIKA B.S.R
    doddappa ur blog is really nice to see...n ur short poems r very appealing n thought provoking...!! n 'ondu gudina kate'is also good n i liked the effective lines written in between the photos...totally everything is wonderful doddappa.....

    ಕವಿ ನಾಗರಾಜ್
    ಪ್ರಿಯ ಅಂಬಿಕಾ, ನಿನಗೆ ಒಪ್ಪಿಗೆಯಾದರೆ ನನಗೆ ಸಂತೋಷ.ಕನ್ನಡದಲ್ಲಿ ಪ್ರತಿಕ್ರಿಯೆ ಕೊಡಲು ಪ್ರಯತ್ನಿಸು.ಉಳಿದ ಬರಹಗಳನ್ನೂ ಓದು, ಪ್ರತಿಕ್ರಿಯಿಸು.

    shreeshum
    ಉತ್ತಮ ಬರಹ

    manju
    ಕವಿ ನಾಗರಾಜರೆ, ಪಿಕಳಾರನ ಸ೦ಸಾರದ ಉತ್ತಮ ಚಿತ್ರಗಳೊ೦ದಿಗೆ ಮನಕೊಪ್ಪುವ ಲೇಖನ ನೀಡಿದ್ದಕ್ಕೆ ನಿಮಗೆ ವ೦ದನೆಗಳು.

    ಬೆಳ್ಳಾಲ ಗೋಪಿನಾಥ ರಾವ್6
    ಕವಿಯವರೇ
    ನಿಜ ಚಿತ್ರ ಲೇಖನ ಎರಡೂ ಮುದ್ದಾಗಿವೆ

    ಕವಿ ನಾಗರಾಜ್
    ಶ್ರೀಯುತ ಶರ್ಮ, ಮಂಜು, ಗೋಪಿನಾಥರಿಗೆ ಮೆಚ್ಚುಗೆಯಾಗಿರುವುದು ನನಗೆ ಸಂತಸ ತಂದಿದೆ. ಧನ್ಯವಾದಗಳು.

    ಪ್ರಸನ್ನ.ಎಸ್.ಪಿ
    ಚಿತ್ರಗಳು ಚೆನ್ನಾಗಿದೆ ಕವಿಗಳೇ, ಆದರೂ ಪಿಕಳಾರಗಳ ಗೀಜರ್‍ ಬಾಲದ ಮೇಲೆ ಗೂಡು ಕಟ್ಟುವ ಧೈರ್ಯ ಮೆಚ್ಚಬೇಕಾದ್ದೇ!
    -ಪ್ರಸನ್ನ.ಎಸ್.ಪಿ

    ಬೆಳ್ಳಾಲ ಗೋಪೀನಾಥ ರಾವ್
    ಕವಿಯವರೇ
    ನಿಜ ಚಿತ್ರ ಲೇಖನ ಎರಡೂ ಮುದ್ದಾಗಿವೆ

    ಪ್ರತ್ಯುತ್ತರಅಳಿಸಿ
  2. Kishorekumarb Kishore
    Nim kainali irodu ade akki ita marigala

    Kavi Nagaraj
    ಹೌದು.

    Venkatesh Babu
    A manne kottithu preethiya vathavarna

    ಪ್ರತ್ಯುತ್ತರಅಳಿಸಿ