ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು
ಕಂಡ ಕಂಡವರ ಗುಂಡಿಗೆಯ ಬಗೆದಿತ್ತು||
ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ
ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ
ಯಾರನೂ ಉಳಿಸಿಲ್ಲ, ಬೇಡಿದರೂ ಬಿಡಲಿಲ್ಲ||
ನಗುವು ಬಂದೀತೆಂದು ಹಲ್ಲ ಮುರಿದಿತ್ತು
ಓಡಿ ಹೋದಾರೆಂದು ಕಾಲ ತುಂಡರಿಸಿತ್ತು.
ಬೇಡವೆಂದವರ ಕೈಯನೇ ಕಡಿದಿತ್ತು||
ಕೈಚೆಲ್ಲಿ ಕುಳಿತವರ ಬೆದರಿ ಬೆಂಡಾದವರ
ಗಂಟಲನೆ ಸೀಳಿ ಗಹಗಹಿಸಿ ನಕ್ಕಿತ್ತು||
ಸಾಕ್ಷಿಯಾದವರ ನಾಲಗೆಯ ನುಂಗಿತ್ತು
ನೊಂದು ಬೆಂದ ಅತೃಪ್ತ ಆತ್ಮಗಳುತಿರುಗಿ ಬೀಳುವ ವೇಳೆ ಕಾಲ ಮಿಂಚಿತ್ತು||
-ಕ.ವೆಂ.ನಾಗರಾಜ್
[ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು.]
21-04-2013ರ 'ಜನಮಿತ್ರ' ಪತ್ರಿಕೆಯಲ್ಲಿ ಪ್ರಕಟವಾಗಿದೆ.
21-04-2013ರ 'ಜನಮಿತ್ರ' ಪತ್ರಿಕೆಯಲ್ಲಿ ಪ್ರಕಟವಾಗಿದೆ.
AMBIKA B.S.R
ಪ್ರತ್ಯುತ್ತರಅಳಿಸಿnice n a realistic poem....doddappa
ಕವಿ ನಾಗರಾಜ್
ಥ್ಯಾಂಕ್ಯು, ಪುಟ್ಟ.
ಕವಿ ನಾಗರಾಜ್
ಕೌಶಿಕ
ಚನ್ನಾಗಿದೆ... ಅದೇನೊ ಗೊತ್ತಿಲ್ಲ... ನಿಮ್ಮೀ ಸಾಲುಗಳನ್ನು ನೋಡಿದ ಕೂಡಲೆ "ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದೋರ ತುಳಿಯುತಲಿತ್ತು' ನೆನಪಾಯಿತು...
ಮಾಲತಿ
ಆ ಸ್ವಾರ್ಥಕ್ಕೆ ತಲೆಬಾಗಲೆ ಬೇಕೆನೊ ದಾರಿಯಿಲ್ಲದೆ...
Ksraghavendranavada
ಉತ್ತಮ ವಾಸ್ತವಿಕ ಚಿತ್ರಣವುಳ್ಳ ಕವನ ಕವಿನಾಗರಾಜರೇ,
ನಮನಗಳು.
ತೇಜಸ್ವಿ
ನಾಗರಾಜ್‌ರವರೇ ಚೆನ್ನಾಗಿದೆ ನಿಮ್ಮ ಕವನ.
ವೆ೦ಕಟೇಶಮೂರ್ತಿ. ವಿ.ಎಸ್.
ನಾಗರಾಜ್‌ರವರೇ ಚೆನ್ನಾಗಿದೆ. ನನ್ನಿ
ಬೆಳ್ಳಾಲ ಗೋಪೀನಾಥ ರಾವ್
ಕವಿಗಳೇ
ಏನ್ ಚೆನ್ನಾಗಿ ಬರ್ದ್ರಿ ಸಾರ್! ಉತ್ತಮ ಕವಿತೆ. ಧನ್ಯವಾದಗಳು