1971-72ರಲ್ಲಿ ನಾನು ಅಂಚೆ ಇಲಾಖೆಯ ಕೆಲಸಕ್ಕೆ ಆಯ್ಕೆಯಾದಾಗ ಪ್ರಾರಂಭದಲ್ಲಿ ಮೈಸೂರಿನ ಅಂಚೆ ತರಬೇತಿ ಕೇಂದ್ರದಲ್ಲಿ ಮೂರು ತಿಂಗಳ ತರಬೇತಿ ನೀಡಿದ್ದರು. ಆ ಸಂದರ್ಭದಲ್ಲಿ ಅಂಚೆ ತರಬೇತಿ ಕೇಂದ್ರದ ಗೀತೆಯೆಂದು ಪರಿಗಣಿಸಿದ್ದ ಈ ಹಾಡನ್ನು ಆರಿಸಿದ್ದ ಪುಣ್ಯಾತ್ಮನನ್ನು ನೆನೆಸಿಕೊಳ್ಳುತ್ತೇನೆ. ಭಗತ್ ಸಿಂಗ್ ಕುರಿತಾದ ಶಹೀದ್ ಎಂಬ ಹಿಂದಿ ಚಲನಚಿತ್ರದಲ್ಲಿ ಭಗತ್ ಸಿಂಗ್ ದೇಶಕ್ಕಾಗಿ ಹೋರಾಡಿ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ನಂತರ ಆತನ ಶವಮೆರವಣಿಗೆಯ ಸಂದರ್ಭದಲ್ಲಿ ಹಿನ್ನೆಲೆಗೀತೆಯಾಗಿ ಮಹಮದ್ ರಫಿಯವರು ಹಾಡಿದ್ದ ಗೀತೆ ಅದು. ಈ ಹಾಡನ್ನು ಸಾಮೂಹಿಕವಾಗಿ ನಮ್ಮಿಂದ ಹೇಳಿಸಲಾಗುತ್ತಿತ್ತು.
ವತನ್ ಕಿ ರಾಹ ಮೇ ವತನ್ ಕೆ ನೌಜವಾನ್ ಶಹೀದ್ ಹೋ|
ಪುಕಾರತೆ ಹೈ ಯಹ ಜಮೀನ್ ಆಸ್ಮಾ(ನ್) ಶಹೀದ್ ಹೋ||
(ದೇಶಕ್ಕಾಗಿ ದೇಶದ ನವಯುವಕರೇ ಅಮರರಾಗಿರಿ|
ನೆಲ ನಭಗಳು ಕರೆಯುತಿಹವು ಅಮರರಾಗಿರಿ||)
ಈ ರೀತಿ ಪ್ರಾರಂಭವಾಗುತ್ತಿದ್ದ ಈ ಹಾಡಿನ ಪ್ರತಿ ಸಾಲಿನಲ್ಲೂ ದೇಶಕ್ಕಾಗಿ ಹೋರಾಡುವ, ದೇಶಕ್ಕಾಗಿ ಜೀವನ ಮುಡುಪಿಡುವ ಪ್ರೇರಣೆ ತುಂಬಿಸಲಾಗಿತ್ತು. ಈ ಹಾಡನ್ನು ಹೇಳುವಾಗಲೆಲ್ಲಾ ನನಗೆ ಗಂಟಲು ತುಂಬಿ ಬರುತ್ತಿತ್ತು. ಭಾವಾವೇಶಕ್ಕೆ ಒಳಗಾಗುತ್ತಿದ್ದೆ. ಈ ಹಾಡನ್ನು ನಾನು ಈಗಲೂ ನೆನೆಸಿಕೊಳ್ಳುತ್ತಿದ್ದು, ಇದು ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ಈ ಹಾಡಿನ ಸಾಹಿತ್ಯ ಹೀಗಿದೆ:
ವತನ್ ಕೀ ರಾಹ್ ಮೇ. .
ವತನ್ ಕೀ ರಾಹ್ ಮೆ ವತನ್ ಕೆ ನೌ ಜವಾನ್ ಶಹೀದ್ ಹೋ|
ಪುಕಾರ್ ತೀ ಹೈ ಯಹ ಜಮೀನ್ -ಆಸ್ಮಾ(ನ್) ಶಹೀದ್ ಹೋ||
ಶಹೀದ್ ತೇರೀ ಮೌತ್ ಹೀ ತೇರೆ ವತನ್ ಕೀ ಜಿಂದಗೀ
ತೇರೇ ಲಹೂ ಸೆ ಜಾಗ್ ಉಠೇಗಿ ಇಸ್ ಚಮನ್ ಕೀ ಜಿಂದಗೀ
ಖಿಲೇಂಗೇ ಫೂಲ್ ಉಸ್ ಜಗಹ್ ಪೆ ತು ಜಹಾನ್ ಶಹೀದ್ ಹೋ||
. .ವತನ್ ಕಿ. .
ಗುಲಾಮ್ ಉಠ್ ವತನ್ ಕೆ ದುಷ್ಮನೋಂಸೆ ಇಂತಖಾಮ್ ಲೇ
ಇನ್ ಅಪ್ನೆ ದೋನೋ ಬಾಜೂವೋಂ ಸೆ ಖಂಜರೋಂಕಾ ಕಾಮ್ ಲೇ
ಚಮನ್ ಕೇ ವಾಸ್ತೆ ಚಮನ್ ಕೆ ಬಾಗ್‌ಬಾನ್ ಶಹೀದ್ ಹೋ||
. .ವತನ್ ಕಿ. .
ಪಹಾಡ್ ತಕ್ ಭೀ ಕಾಂಪನೇ ಲಗೇ ತೇರೇ ಜುನೂನ್ ಸೆ
ತೂ ಆಸ್ಮಾ(ನ್) ಪೆ ಇಂಖಿಲಾಬ್ ಲಿಖ್ ದೆ ಅಪ್ನೆ ಖೂನ್ ಸೆ
ಜಮೀನ್ ನಹೀಂ ತೇರಾ ವತನ್ ಹೈ ಆಸ್ಮಾನ್ ಶಹೀದ್ ಹೋ||
. .ವತನ್ ಕಿ. .
ವತನ್ ಕಿ ಲಾಜ್ ಜಿಸ್ ಕೋ ಥಿ ಅಜೀಝ್ ಅಪ್ನಿ ಜಾನ್ ಸೇ
ವಹ್ ನೌ ಜವಾನ್ ಜಾ ರಹಾ ಹೈ ಆಜ್ ಕಿತ್ನೀ ಶಾನ್ ಸೇ
ಇಸ್ ಏಕ್ ಜವಾನ್ ಕೀ ಖಾಕ್ ಪರ್ ಹರ್ ಏಕ್ ಜವಾನ್ ಶಹೀದ್ ಹೋ||
. .ವತನ್ ಕಿ. .
ಹೈ ಕೌನ್ ಖುಷ್‌ನಸೀಬ್ ಮಾ ಕಿ ಜಿಸ್ ಕಾ ಯಹ್ ಚಿರಾಗ್ ಹೈ
ವೊ ಖುಷ್‌ನಸೀಬ್ ಹೈ ಕಹಾಂ ಯಹ್ ಜಿಸ್ಕೆ ಸರ್ ಕಾ ತಾಜ್ ಹೈ
ಅಮರ್ ವೊ ದೇಶ್ ಕ್ಯೋಂ ನ ಹೋ ಕಿ ತು ಜಹಾನ್ ಶಹೀದ್ ಹೋ||
. .ವತನ್ ಕಿ. .
[ಚಿತ್ರ: ಶಹೀದ್. ಗಾಯಕರು: ರಫಿ, ಮಸ್ತಾನ್, ಸಂದರ್ಭ: ಹುತಾತ್ಮ ಭಗತ್ ಸಿಂಗ್ ಶವಯಾತ್ರೆ]
*************
Watan Ki Raah Mein lyrics by Mohammad Rafi
Watan ki raah mein watan ke naujawan shaheed ho
pukaarte hain ye zameen-o-aasmaan shaheed ho
shaheed teri maut hi tere vatan ki zindagi
tere lahu se jaag uthegi is chaman mein zindagi
khilenge phool us jagah ki tu jahaan shaheed ho,
watan ki ...
ghulam uth watan ke dushmano se intaqaam le
in apne donon baajuon se khanjaron ka kaam le
chaman ke vaaste chaman ke baagbaan shaheed ho,
watan ki ...
pahaad tak bhi kaanpane lage tere junoon se
tu aasmaan pe inqalaab likh de apane khoon se
zameen nahi tera watan hai aasmaan shaheed ho,
watan ki ...
watan ki laaj jisko thi ajeez apani jaan se
wo naujavaan ja raha hai aaj kitani shaan se
is ek jawaan ki khaak par har ik jawaan shaheed ho
watan ki ...
hai kaun khushanaseeb maan ki jiska ye chiraag hai
wo khushanaseeb hai kahaan ye jisake sar ka taaj hai
amar wo desh kyon na ho ki tu jahaan shaheed ho,
watan ki ...
****************
ಈ ಹಾಡಿನ ಭಾವಾನುವಾದವನ್ನು ಮಾಡಿದ್ದು ತಮ್ಮ ಮುಂದಿಟ್ಟಿರುವೆ. ಇದು ಪದಶಃ ಮಾಡಿದ ಅನುವಾದವಲ್ಲ. ಮೂಲಾರ್ಥ ಉಳಿಸಿ ರಚಿಸಿರುವ ಭಾವಾನುವಾದ.
ನಾಡಿಗಾಗಿ . .
ನವತರುಣರೆ ನಾಡಿಗಾಗಿ ಜೀವಜ್ಯೋತಿಯುರಿಸಿರಿ
ನೆಲ ನಭಗಳು ಮೊರೆಯಿಡುತಿರೆ ಹುತಾತ್ಮರಾಗಿರಿ ||
ಅಮರ ನಿನ್ನ ಬಲಿದಾನದಿ ದೇಶ ಬೆಳಗಲಿಹುದು
ನಿನ್ನ ರಕ್ತ ಹೂದೋಟಕೆ ಕಸುವ ನೀಡಲಿಹುದು
ನೀನು ಬಿದ್ದ ತಾಣದಿ ನವಕುಸುಮವು ನಗುವುದು
.. ನವತರುಣರೇ ..
ಮೈಕೊಡವಿ ಮೇಲೇಳು ವೈರಿಗಳ ಬಡಿದಟ್ಟು
ಕೈಗಳೆ ಕರವಾಳವಲ್ತೆ ಎದ್ದು ತೊಡೆಯ ತಟ್ಟು
ತೋಟದೊಡೆಯ ಬಲಿಯಾಗಲು ತೋಟಕದು ಕಟ್ಟು
.. ನವತರುಣರೇ ..
ನಿನ್ನ ಈ ಹೂಂಕಾರಕೆ ಗಿರಿಪರ್ವತ ನಡುಗಿದೆ
ನಿನ್ನ ನೆತ್ತರ ಚಿತ್ತಾರವು ಮೂಡಲಿ ನಭದೆಲ್ಲೆಡೆ
ನೆಲವಲ್ಲವು ಅಮರನಾಗು ನಿನ್ನ ನಾಡು ಮೇಲೆ
.. ನವತರುಣರೇ ..
ಪ್ರಾಣಕಿಂತ ನಾಡಮಾನ ಹಿರಿದೆಂದನು ಅವನು
ಧನ್ಯತೆಯಲಿ ನೋಡು ಹೇಗೆ ಮೇಲಕೇರುತಿಹನು
ಅಮರ ಸಂದೇಶವದು ಪ್ರತಿ ತರುಣಗೆ ಪ್ರೇರಣೆಯು
.. ನವತರುಣರೇ ..
ಮುತ್ತಿನಂಥ ಮಗನ ಹೆತ್ತ ಮಾತೆಯದು ಯಾರು
ಕುಲತಿಲಕನೆತ್ತಾಡಿ ಬೀಗಿರುವ ಭಾಗ್ಯವಂತೆ ಯಾರು
ದೇಶಕಾಗಿ ದೇಹವಿಡಲು ಅಜರ ಅಮರವೀ ನಾಡು
.. ನವತರುಣರೇ ..
[ಭಾವಾನುವಾದ: ಕ.ವೆಂ.ನಾಗರಾಜ್]
****************
ಮೂಲ ಹಾಡಿನ ಆಡಿಯೋ ಆಲಿಸಿರಿ:

ಈ ಹಾಡು ಕೇಳಿದಾಗಲೆಲ್ಲ ರೋಮಾಂಚನಗೊಳ್ಳುತ್ತಿರುತ್ತೇನೆ. ರಫೀ ಸಾಬ್ ಅಮೋಘವಾಗಿ ಹಾಡಿದ್ದಾರೆ ಅಲ್ಲಲ್ಲ ಜೀವಿಸಿ ಬಿಟ್ಟಿದ್ದಾರೆ.
ಪ್ರತ್ಯುತ್ತರಅಳಿಸಿಇಂತಹ ದೇಶ ಭಕ್ತಿ ಗೀತೆಯನ್ನು ತರಬೇತಿ ಕೇಂದ್ರದ ಪ್ರಾರ್ಥನಾ ಗೀತೆಯಾಗಿಸಿದ ಮಹನೀಯರಿಗೆ ಶರಣು.
ಈ ಭಾವಾರ್ಥದ ಮೂಲಕ ತಮ್ಮ ಅನುವಾದ ಪ್ರತಿಭೆಯೂ ನಮ್ಮ ಗಮನಕ್ಕೆ ಬಂದಿತು.
ಬದರೀನಾಥರೇ, ಎದೆತುಂಬಿ, ಮನತುಂಬಿ, ಭಾವತುಂಬಿ ಅನ್ನುತ್ತಾರಲ್ಲಾ, ಹಾಗಿದೆ, ಈ ಗೀತೆ! ಧನ್ಯವಾದಗಳು.
ಅಳಿಸಿ