ಶುಕ್ರವಾರ, ಮಾರ್ಚ್ 28, 2014

ವಿಷಣ್ಣತೆ


ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು
ಬಂದ ದಾರಿಯನೊಮ್ಮೆ ನಿಂತು ನೋಡಿದೆ ಮನವು|
ಗುಣಿಸಿ ಭಾಗಿಸಿ ಕೂಡಿಸಿ ಕಳೆದುಳಿದ ಶೇಷವು
ಸೋಲೋ ಗೆಲುವೋ ತಿಳಿಯದ ವಿಷಣ್ಣಭಾವವು||

-ಕ.ವೆಂ.ನಾಗರಾಜ್.

4 ಕಾಮೆಂಟ್‌ಗಳು:

 1. ವಿ.ಆರ್.ಭಟ್
  Good, keep writing

  ಕವಿ ನಾಗರಾಜ್
  Thanks.

  Ksraghavendranavada
  ಬನ್ನಿ ನಮ್ಮ ಸಾಲಿಗೆ, ವಿಷಾದ ಕವಿಗಳ ಗು೦ಪಿಗೆ!
  ವಿಷಣ್ಣತೆಯ ವ್ಯಕ್ತನೆ ಚೆನ್ನಾಗಿದೆ. ಧನ್ಯವಾದಗಳು.

  Kavinagaraj
  ಭಾವಜೀವಿಗಳಿಗೆ ವಿಷಾದ ಹೊಸದಲ್ಲ. ಮೆಚ್ಚುಗೆಗೆ ನಮನ ನಾವಡರೇ.

  thochu4
  what a truth sir..!! starting of my ending days..!!
  gopi

  ಪ್ರತ್ಯುತ್ತರಅಳಿಸಿ
 2. ಕ್ಷಮಿಸಿ ಸಾರ್,
  ಕವನದ ಹೂರಣ ನೆಚ್ಚಿಗೆಯಾದರೂ, ಅದು ಹೇಳ ಹೊರಟಿರುವ ಭಾವ ನೆಚ್ಚಿಗೆಯಾಗಲಿಲ್ಲ.
  ತಾವು ನಮ್ಮ ಪಾಲಿಗೆ youngಊ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. :) ಯಂಗಾಗೇ ಇರಬಯಸುವೆ, ಬದರೀನಾಥರೇ. ಕೆಲವೊಮ್ಮೆ ಹೆಂಗೆ ಅನ್ನಿಸಿಬಿಡುತ್ತದೆ! ಧನ್ಯವಾದಗಳು.

   ಅಳಿಸಿ

  2. Ramesh Kamath
   ನೀವು ನಿಮ್ಮ ಮನಸ್ಸಿನ ಹೊರಕೋಣೇಯಲ್ಲಿ ಸದಾಕ್ರಿಯಾಶೀಲರಾಗಿರುವಂತೆ ಕಂಡರೂ ಒಳಮನಸ್ಸಿನ ಕೋಣೆಯಲ್ಲಿ ನಿಮ್ಮಷ್ಟಕ್ಕೆ ನೀವೆ ಗಹನವಾದ ವಿಚಾರಗಳನ್ನು ಮನಸ್ಸಿನೊಂದಿಗೆ ಹಂಚಿಕೊಳ್ಳತ್ತಿರುವ ಭಾವ ಎದ್ದು ಕಾಣುತ್ತಿದೆ ಸ್ನೇಹಿತರೆ.

   ಅಳಿಸಿ