ಶುಕ್ರವಾರ, ನವೆಂಬರ್ 6, 2015

ಮೂಢ ಉವಾಚ - 100

ಭುಗಿಲೆದ್ದ ಜ್ವಾಲಾಗ್ನಿ ಮನೆಯನ್ನೆ ಸುಟ್ಟೀತು
ಹದವರಿತ ಬೆಂಕಿಯದು ಅಟ್ಟುಣಬಡಿಸೀತು |
ಕ್ರೋಧಾಗ್ನಿ ತರದಿರದೆ ಬಾಳಿನಲಿ ವಿರಸ
ಹದವರಿತ ಕೋಪವದು ಹಿತಕಾರಿ ಮೂಢ ||

1 ಕಾಮೆಂಟ್‌:

  1. Sridhar Bandri
    ಪಕ್ಕದ ಮನೆಗೆ ಬೆಂಕಿ ಇಟ್ಟು ಇಂದು ಖುಷಿ ಪಡುವವರು ಅದರ ಜ್ವಾಲೆಯಿಂದ ತಮ್ಮ ಮನೆಯೂ ಹೊತ್ತಿ ಉರಿದೀತು ಎನ್ನುವ ಪರಿಜ್ಞಾನವಿಲ್ಲದಂತೆ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಶೋಚನೀಯ ವಿಚಾರ. ಅವರೊಮ್ಮೆ ಈ ಚುಟುಕನ್ನು ಓದಿದರೆ ಒಳಿತು.

    ಪ್ರತ್ಯುತ್ತರಅಳಿಸಿ