ಮಂಗಳವಾರ, ಏಪ್ರಿಲ್ 15, 2014

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!

ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?

ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!

ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?

ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!

ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ, ಸತ್ಯ!
****
-ಕವಿನಾಗರಾಜ್.

1 ಕಾಮೆಂಟ್‌:

  1. Ksraghavendranavada
    ನಮೋನಮ:,ವೇದಸುಧೆಯಲ್ಲಿಯೇ ಓದಿದ್ದೆ. ಪ್ರತಿಕ್ರಿಯಿಸುವುದನ್ನು ಮರೆತಿದ್ದೆ.
    ನಮಸ್ಕಾರಗಳೊ೦ದಿಗೆ,

    Kavinagaraj
    ಧನ್ಯವಾದ, ನಾವಡರೇ.

    ಆಸು ಹೆಗ್ಡೆ
    ಸತ್ಯ ಸತ್ಯ ಸತ್ಯ ನಿಮ್ಮ ಮಾತು ಸತ್ಯ
    ಸತ್ಯವೆಂಬುದು ಮೂರುಕಾಲಕ್ಕೂ ಸತ್ಯ
    ಹೊರಗೆಲ್ಲಾ ಹುಡುಕಿದರೆ ಸಿಗದು ಸತ್ಯ
    ಒಳಗೇ ಇಣುಕಿದಾಗ ಕಾಣುವುದು ಸತ್ಯ
    -ಆಸು ಹೆಗ್ಡೆ

    Kavinagaraj
    ಧನ್ಯವಾದ ಸುರೇಶರೇ. ಒಳಗೆ ಇಣುಕಿದರೆ ಕಾಣುವ ಸತ್ಯವನ್ನು ಕಂಡರೂ ಕಾಣದಂತಿರುವುದೂ ನಮ್ಮದೇ ಸತ್ಯ.

    ಬೆಳ್ಳಾಲ ಗೋಪೀನಾಥ ರಾವ್
    ಹತ್ತು ಜನರಿಗೊಳ್ಳೆಯದಾದರೆ ಅದೇ ಸತ್ಯ
    ಮನಸ್ಸಾಕ್ಷಿಗೊಪ್ಪುವಂತೆ ನಡೆವುದೇ ಸತ್ಯ
    ಕವಿಯವರೇ
    ಸರಳ ಸುಂದರ ಕವನ

    Kavinagaraj
    ನಿಮ್ಮ ಪ್ರೋತ್ಸಾಹಕ ಪ್ರತಿಕ್ರಿಯೆಗೆ ವಂದನೆಗಳು, ಗೋಪಿನಾಥರೇ.

    Nirmala Krishnamurthy
    sathyavada maatu.

    ಪ್ರತ್ಯುತ್ತರಅಳಿಸಿ